ವಿದ್ಯುತ್ ಶಾಟ್ ಸರ್ಕ್ಯೂಟ್ ವರ್ಕಾಡಿ ತಚ್ಚಿರೆ ನಿವಾಸಿ ಅಬ್ದುಲ್ ಖಾದರ್ ರ ಮನೆಗೆ ಬೆಂಕಿ. ಲಕ್ಷಾಂತರ ರೂಪಾಯಿ ನಾಶ ನಷ್ಟ.
ಜೂನ್ 18, 2024
0
ವಿದ್ಯುತ್ ಶಾಟ್ ಸರ್ಕ್ಯೂಟ್ ವರ್ಕಾಡಿ ತಚ್ಚಿರೆ ನಿವಾಸಿ ಅಬ್ದುಲ್ ಖಾದರ್ ರ ಮನೆಗೆ ಬೆಂಕಿ. ಲಕ್ಷಾಂತರ ರೂಪಾಯಿ ನಾಶ ನಷ್ಟ.
ವರ್ಕಾಡಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಕರಿ ಜಂಕ್ಷನ್ ಬಳಿಯ ತಚ್ಚಿರೆ ನಿವಾಸಿ ಅಬ್ದುಲ್ ಖಾದರ್ (ಪೊಡಿಯ) ರವರ ಮನೆಗೆ ಬೆಂಕಿ ತಗಲಿ ಮನೆಯ ಮೇಲ್ಚಾವಣಿ, ಮನೆಯ ಇಲೆಕ್ಟ್ರಿಕ್ ವಸ್ತುಗಳು ಉರಿದು ಅಪಾರ ನಾಶ ನಷ್ಟ ಉಂಟಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಉಪ್ಪಳದಿಂದ ಅಗ್ನಿಶಾಮಕ ದಳ ಆಗಮಿಸಿ, ಊರವರ ಸಹಾಯದೊಂದಿಗೆ ಬೆಂಕಿಯನ್ನು ನಂದಿಸಿದರು. ಬೆಂಕಿಯ ಕೆನ್ನಾಲಿಗೆ ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ ಹೊತ್ತಿ ಉರಿದಿದ್ದು, ಅಗತ್ಯ ದಾಖಲೆ ಪತ್ರಗಳು ಸೇರಿದಂತೆ ಮನೆಯ ಹಲವು ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ. ಈ ವೇಳೆ ಮನೆಯವರು ಹೊರ ಬಂದ ಕಾರಣ ಅಪಾಯ ತಪ್ಪಿತ್ತು. ಸುಮಾರು ಮೂರು ಲಕ್ಷ ರೂಪಾಯಿ ನಾಶ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.