ಮಂಜೇಶ್ವರ ಪ್ರೆಸ್ ಕ್ಲಬ್ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ.
ಮೇ 10, 2025
0
ಮಂಜೇಶ್ವರ ಪ್ರೆಸ್ ಕ್ಲಬ್ ವಾರ್ಷಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ.
ಮಂಜೇಶ್ವರ: ಮಂಜೇಶ್ವರ ಪ್ರೆಸ್ ಕ್ಲಬ್ ನ ವಾರ್ಷಿಕ ಮಹಾ ಸಭೆ ಹಾಗೂ ನೂತನ ಸಾರಥಿಗಳ ಆಯ್ಕೆ ನಡೆಯಿತು.
ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ನಡೆದ ಮಹಾ ಸಭೆಯನ್ನು ಹಿರಿಯ ಪತ್ರಕರ್ತ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಅಬ್ದುಲ್ ರಹ್ಮಾನ್ ಉದ್ಯಾವರ ಅಧ್ಯಕ್ಷತೆ ವಹಿಸಿದರು. ಪತ್ರಕರ್ತರಾದ ರತನ್ ಕುಮಾರ್ ಹೊಸಂಗಡಿ, ಆರಿಫ್ ಮಚ್ಚಂಪ್ಪಾಡಿ, ಅಬ್ದುಲ್ ರಹ್ಮಾನ್ ಪಾರಕಟ್ಟ, ಸಾಯಿಭದ್ರ ರೈ ಸಿರಿಯಾ, ಸಲಾಂ ವರ್ಕಾಡಿ, ರವಿ ಪ್ರತಾಪನಗರ, ದೀಪಕ್ ರಾಜ್ ಉಪ್ಪಳ ಮೊದಲಾದವರು ಮಾತನಾಡಿದರು. 2025 -
2027 ನೇ ಸಾಲಿನ ಮಂಜೇಶ್ವರ ಪ್ರೆಸ್ ಕ್ಲಬ್ ಅಧ್ಯಕ್ಷರಾಗಿ ಸಲಾಂ ವರ್ಕಾಡಿ, ಪ್ರ.ಕಾರ್ಯದರ್ಶಿಯಾಗಿ ಸನಲ್ ಕುಮಾರ್, ಕೋಶಾಧಿಕಾರಿಯಾಗಿ ರತನ್ ಕುಮಾರ್ ಹೊಸಂಗಡಿ ಆಯ್ಕೆಯಾದರು. ಇತರ ಪದಾಧಿಕಾರಿಗಳಾಗಿ ಅಬ್ದುಲ್ ರಹ್ಮಾನ್ ಉದ್ಯಾವರ, ಸಾಯಿಭದ್ರ ರೈ, ಅನೀಸ್ ಉಪ್ಪಳ, ಆರಿಫ್ ಮಚ್ಚಂಪ್ಪಾಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರ್ಷಾದ್ ವರ್ಕಾಡಿ, ರವಿಪ್ರತಾಪ್ ನಗರ, ಅಬ್ದುಲ್ ರಹ್ಮಾನ್ ಪಾರಕಟ್ಟ, ದೀಪಕ್ ರಾಜ್ ಉಪ್ಪಳ ಎಂಬವರನ್ನೂ ಆಯ್ಕೆಗೊಳಿಸಲಾಯಿತು. ಅನೀಸ್ ಉಪ್ಪಳ ಸ್ವಾಗತಿಸಿ, ಸನಲ್ ಕುಮಾರ್ ವಂದಿಸಿದರು.