ಸ್ವಾತಂತ್ರ ಸಮರ ಸೇನಾನಿ, ತುಳುನಾಡ ಅಪ್ರತಿಮ ಕಮ್ಯುನಿಸ್ಟ್ ನೇತಾರ, ಮಾಜಿ ರಾಜ್ಯಸಭಾ ಸದಸ್ಯ ನೀರಾವರಿ ಸಚಿವ ಕಾಮ್ರೇಡ್ ಡಾ.ಎ ಸುಬ್ಬರಾವ್ ರವರ 21 ನೇ ಚರಮ ವಾರ್ಷಿಕ.
ಸೆಪ್ಟೆಂಬರ್ 16, 2024
0
ಸ್ವಾತಂತ್ರ ಸಮರ ಸೇನಾನಿ, ತುಳುನಾಡ ಅಪ್ರತಿಮ ಕಮ್ಯುನಿಸ್ಟ್ ನೇತಾರ, ಮಾಜಿ ರಾಜ್ಯಸಭಾ ಸದಸ್ಯ ನೀರಾವರಿ ಸಚಿವ ಕಾಮ್ರೇಡ್ ಡಾ.ಎ ಸುಬ್ಬರಾವ್ ರವರ 21 ನೇ ಚರಮ ವಾರ್ಷಿಕ.
ಮಂಜೇಶ್ವರ: ಸ್ವಾತಂತ್ರ ಸಮರ ಸೇನಾನಿ, ತುಳುನಾಡ ಅಪ್ರತಿಮ ಕಮ್ಯುನಿಸ್ಟ್ ನೇತಾರ, ಮಾಜಿ ರಾಜ್ಯಸಭಾ ಸದಸ್ಯ ನೀರಾವರಿ ಸಚಿವ ಕಾಮ್ರೇಡ್ ಡಾ l ಎ ಸುಬ್ಬ ರಾವ್ ರವರ 21 ನೇ ಚರಮ ವಾರ್ಷಿಕ ದಿನಾಚರಣೆ ಯನ್ನು CPI ರಾಜ್ಯ ಸಹ ಕಾರ್ಯದರ್ಶಿ ಇ ಚಂದ್ರಶೇಖರನ್ MLA ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ನ ಸಭಾಂಗಣದಲ್ಲಿ ಉದ್ಘಾಟಿಸಿದರು. ಸಿಪಿಐ ಮಂಡಲ ಕಾರ್ಯದರ್ಶಿ ಜಯರಾಂ ಬಲ್ಲಂಗುಡೇಲ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಸಿ ಪಿ ಬಾಬು, ರಾಜ್ಯ ಸಮಿತಿ ಸದಸ್ಯರಾದ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪಿಲ್, ಟಿ. ಕೃಷ್ಣನ್, ಮಾಜಿ ಶಾಸಕರಾದ ಎಂ ಕುಮಾರನ್, ಡಾಕ್ಟರ್ ಸುಬ್ಬ ರಾವ್ ರವರ ಸುಪುತ್ರ ನ್ಯಾಯವಾದಿ ಅಜಿತ್ ಕುಮಾರ್, ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ರಾಮಕೃಷ್ಣ ಕಡಂಬಾರ್, ಅಜಿತ್ ಎಂ.ಸಿ ಲಾಲ್ ಬಾಗ್, ಸುಂದರಿ ಆರ್. ಶೆಟ್ಟಿ ಮೊದಲಾದವರು ಮಾತನಾಡಿದರು. ಎ. ಸುಬ್ಬರಾವ್ ರ ಪುತ್ರ ನ್ಯಾ. ಅಜಿತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಎಸ್ ರಾಮಚಂದ್ರ ಸ್ವಾಗತಿಸಿದರು.