ಬಂಬ್ರಾಣ ಕೃಷಿ ನಾಶ, ತಲಪಾಡಿ ಟೋಲ್ ವಸೂಲಾತಿ ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿಯ ನಿರ್ಣಯ. - ಬಿವಿ ರಾಜನ್.
ನವೆಂಬರ್ 18, 2023
0
ಬಂಬ್ರಾಣ ಕೃಷಿ ನಾಶ, ತಲಪಾಡಿ ಟೋಲ್ ವಸೂಲಾತಿ ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿಯ ನಿರ್ಣಯ.
ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅತ್ಯಂತ ಅಭಿಮಾನರ್ಹವಾದ ಬಂಬ್ರಾಣ ಪಾಡ ಶೇಖರದಲ್ಲಿ 500 ಏಕ್ರೆಯಲ್ಲಿ ನಡೆಸಿದ ಕೃಷಿ, ಕಾಡು ಪ್ರಾಣಿಗಳ ಅಕ್ರಮಣದಿಂದ ಪೂರ್ಣವಾಗಿ ನಾಶ ಹೊಂದಿದ್ದು, ಕೃಷಿ ಇಲಾಖೆ ರೈತರಿಗೆ ಉಂಟಾದ ಅಪಾರ ಕೃಷಿ ನಾಶಕ್ಕೆ ನಷ್ಟ ಪರಿಹಾರ ನೀಡಬೇಕೆಂದು ಪಾಡ ಶೇಖರ ಸಮಿತಿ ಇತ್ತೀಚೆಗೆ ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿ ಒತ್ತಾಯಿಸಿದ್ದು, ರೈತರ ಈ ಬೇಡಿಕೆಯನ್ನು ಬೆಂಬಲಿಸಿ ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿ ಸದಸ್ಯ ಹಾಗೂ ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ ರಾಜನ್ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಂಡಿಸಿದ ನಿರ್ಣಯವನ್ನು ಅಂಗೀಕರಿಸಿ ಕೃಷಿ ಸಚಿವರಿಗೂ, ಜಿಲ್ಲಾ, ಬ್ಲಾಕ್ ಕೃಷಿ ಅಧಿಕಾರಿಗಳಿಗೆ ಕಳುಹಿಸಿ ಕೊಡಲು ನಿರ್ಧರಿಸಿದ್ದಾರೆ. ಬಿ.ವಿ ರಾಜನ್ ಮಂಡಿಸಿದ ಇನ್ನೊಂದು ನಿರ್ಣಯದಲ್ಲಿ ತಲಪಾಡಿಯಲ್ಲಿರುವ ನವಯುಗ ಟೋಲ್ ಕಂಪೆನಿ ಐದು ಕಿಲೋಮೀಟರ್ ತನಕ ಸಂಚರಿಸುವ ಮಂಜೇಶ್ವರದ ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ತಡೆಯಬೇಕೆಂದು ಒತ್ತಾಯಿಸಿದ ನಿರ್ಣಯವನ್ನು ಸಭೆ ಅವಿರೋಧವಾಗಿ ಅಂಗೀಕರಿಸಿತು. ಇದು ಸಂಬಂಧಿಸಿ ರಾಷ್ಟೀಯ ಹೆದ್ದಾರಿ ಇಲಾಖೆಯಲ್ಲಿನ ಕಣ್ಣೂರ್ ವಿಭಾಗದ ಅಧಿಕೃತರು ಈ ಟೋಲ್ ಸಂಗ್ರಹ ನಡೆಯುತ್ತಿರುವುದು ತಿಳಿದಿಲ್ಲ ಮತ್ತು ಗಮನಕ್ಕೆ ಬಂದಿಲ್ಲವೆಂದು ತಿಳಿಸಿದನ್ನು ಸಭೆಯಲ್ಲಿ ಖಂಡಿಸಲಾಯಿತು. ಈ ಬಗ್ಗೆ ನಡೆದ ಚಳುವಳಿ ಮತ್ತು ಮಂಜೇಶ್ವರ ಶಾಸಕರು ಅವಶ್ಯಪಟ್ಟದ್ದನ್ನು ತಿಳಿದಿಲ್ಲವೆಂದು ವ್ಯಾಖ್ಯಾನಿಸುವುದು ಅಪಮಾನಕರ. ಆದ್ದರಿಂದ ತಾಲೂಕು ಅಭಿವೃದ್ಧಿ ಸಮಿತಿಯ ದಶಂಬರ ತಿಂಗಳ ಸಭೆಗೆ ಮುಂಚಿತವಾಗಿ ಈ ಬಗ್ಗೆ ಅಂತಿಮ ನಿಲುವು ತಿಳಿಸಬೇಕೆಂದು ಬಿ.ವಿ ರಾಜನ್ ಒತ್ತಾಯಿಸಿದರು.