ಶ್ರೀ ಸತ್ಯಸಾಯಿ ಬಾಬಾರವರ 98 ನೇ ಜನ್ಮದಿನೋತ್ಸವ. ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರಿನಲ್ಲಿ 108 ಅಷ್ಟೊತ್ತರ ಸಹಿತ, ನಾಮ ಸಂಕೀರ್ತನೆ. ಕನ್ನಡ ಹಸ್ತ ಪತ್ರಿಕೆ 'ಬೆಳಕು 'ಅನಾವರಣ.
ನವೆಂಬರ್ 27, 2023
0
ಕನ್ನಡ ಹಸ್ತ ಪತ್ರಿಕೆ 'ಬೆಳಕು 'ಅನಾವರಣ.
ಮಂಜೇಶ್ವರ :ಶ್ರೀ ಸತ್ಯಸಾಯಿ ಬಾಬಾ ಅವರ 98ನೇ ಜನ್ಮದಿನೋತ್ಸವ ದ ಸಲುವಾಗಿ ನಡೆದ 108ಅಷ್ಟೊತ್ತರ ಸಹಿತ,ನಾಮ ಸಂಕೀರ್ತನೆ ಇತ್ತೀಚೆಗೆ ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರಿನ ದಿವ್ಯ ಸನ್ನಿಧಿಯಲ್ಲಿ ನಡೆಯಿತು. ಸ್ವಾಮಿಯ ಜೂಲೋತ್ಸವ ತೋತ್ಸವ ಮತ್ತು ಪೂಜಾ ಸತ್ಕರ್ಮ ವಿಧಿವಿಧಾನವನ್ನು ಪುರೋಹಿತರಾದ ಶ್ರೀ ಉದನೇಶ್ವರ ಭಟ್ ನೆರವೇರಿಸಿದರು.
ಈ ಸಂಧರ್ಭದಲ್ಲಿ ಕನ್ನಡ ವಿದ್ಯಾರ್ಥಿಗಳ ಹಸ್ತಪತ್ರಿಕೆಯಾದ 'ಬೆಳಕು ' ಬಾಯಾರು ಸಮಿತಿ ಸದಸ್ಯರಾದ ಶ್ರೀ ಗೋಪಾಲಕೃಷ್ಣ ಭಟ್ ಅವರ ದಿವ್ಯ ಹಸ್ತದಿಂದ ಬಿಡುಗಡೆಗೊಂಡಿತು.
ಈ ಕಾರ್ಯಕ್ರಮದಲ್ಲಿ ಪ್ರಶಾಂತಿ ಸೇವಾ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀ ಪೆಲತಡ್ಕ ರಾಮಕೃಷ್ಣ ಭಟ್, ಕೋಶಾಧಿಕಾರಿ ಶ್ರೀ ನಾರಾಯಣ ಭಟ್, ಶಾಲಾ ಸಂಚಾಲಕರಾದ ಶ್ರೀ ಎಚ್ ಮಹಾಲಿಂಗ ಭಟ್,ಸದಸ್ಯರಾದ ಶ್ರೀ ಸದಾಶಿವ ಭಟ್, ಒಡಿಯೂರು ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ರೇಣುಕಾ ರೈ, ಮುಖ್ಯೋಪಾಧ್ಯಾಯರಾದ ಶ್ರೀ ವಾಮನನ್, ಮಾರ್ಗದರ್ಶಕರಾದ ಶ್ರೀ ಕೃಷ್ಣ ನಾಯಕ್ ಮತ್ತು ಸಮಿತಿ ಸದಸ್ಯರು, ಉಪಸ್ಥಿತರಿದ್ದರು ಶಿಕ್ಷಕ ವೃಂದದವರು,ಶಿಕ್ಷಕೇತರ ಜತೆ ವಿದ್ಯಾರ್ಥಿಗಳು ಭಾಗವಹಿಸಿದರು.
ಶಿಕ್ಷಕರಾದ ಶ್ರೀ ಶ್ರೀಕಾಂತ್ ನಿರೂಪಿಸಿ, ಸಂಚಾಲಕರಾದ ಶ್ರೀ ಎಚ್ ಮಹಾಲಿಂಗ ಭಟ್ ವಂದನಾರ್ಪಣೆ ಗೈದರು. ಕಾಸರಗೋಡು ಸಮಿತಿ ಎಲ್ಲಾ ಸದಸ್ಯರ ಜೊತೆ ಸಮಸ್ತ ಊರಿನ ಭಗವತ್ ಭಕ್ತರು ಈ ಪೂಜಾ ಸಮಾರಂಭದಲ್ಲಿ ಭಾಗವಸಿದರು.