"ಉದ್ಯಾವರ ದಮ್ಮಾಮ್ ಕಮಿಟಿಯ UIEO ಗಮ್ಮತ್ ಚಾಂಪಿಯನ್ಸ್ ಕ್ರಿಕೆಟ್ ಟೂರ್ನಮೆಂಟ್ (GCL -2023) ಸ್ಪೋರ್ಟಿಂಗ್ FSAL ಗೆಲುವು".
ನವೆಂಬರ್ 27, 2023
0
"ಉದ್ಯಾವರ ದಮ್ಮಾಮ್ ಕಮಿಟಿಯ UIEO ಗಮ್ಮತ್ ಚಾಂಪಿಯನ್ಸ್ ಕ್ರಿಕೆಟ್ ಟೂರ್ನಮೆಂಟ್ (GCL -2023) ಸ್ಪೋರ್ಟಿಂಗ್ FSAL ಗೆಲುವು".
ದಮ್ಮಾಮ್: ಮಂಜೇಶ್ವರದ ಉದ್ಯಾವರ ಪ್ರವಾಸಿ ಒಕ್ಕೂಟ UIEO ಉದ್ಯಾವರ ದಮ್ಮಾಮ್ ಕಮಿಟಿಯು ಆಯೋಜಿಸಲಾದ ಗೌಜಿ ಗಮ್ಮತ್ ಸೀಸನ್-3 ಅದರ ಭಾಗವಾದ ಗಮ್ಮತ್ ಚಾಂಪಿಯನ್ಸ್ (GCL -2023) ಕ್ರಿಕೆಟ್ ಟೂರ್ನಮೆಂಟ್ ರಾಕ ಮೈದಾನ ಅಲ್ ಖೋಬರ್'ನಲ್ಲಿ ನಡೆಯಿತು. ಟೀಮ್ ಏನ್ ಆರ್, ಮತ್ತು ಸ್ಪೋರ್ಟಿಂಗ್ FSAL ನಡುವೆ ಫೈನಲ್'ನಲ್ಲಿ ಸ್ಪೋರ್ಟಿಂಗ್ FSAL ಭರ್ಜರಿಯ ಗೆಲುವು ಸಾದಿಸಿದರು.ತಂಡದ ಕಫ್ತಾನ್ ಕೆ ಕೆ ಆಸೀಫ್' ರವರ ನೇತೃತ್ವದಿಂದ ಹಾಗು ನೂರ್ ಭಾಯ್'ಯವರ ನಿರ್ದೇಶನದಿಂದ ತಂಡದ ಆಟಗಾರರ ಶತ ಪ್ರಯತ್ನದಿಂದ ಗೆಲುವು ಸಾಧಿಸಲಾಯಿತು. ಮ್ಯಾನ್ ಒಫ್ ದಿ ಸೀರಿಯಸ್ ನಜ್ಮಾನ್ ಕುಂಜತೂರ್, ಮ್ಯಾನ್ ಒಫ್ ದಿ ಮ್ಯಾಚ್ ತೈರಾಜ್ ಜುಬೈಲ್ ರಿಗೂ ಟ್ರೋಫಿ ಹಾಗು ಪದಕ ನೀಡಿ ಸನ್ಮಾಸಲಾಯಿತು.
Raichur ನಲ್ಲಿ ನಡೆದ CBSE National Athletics Meet 2023'' 800mtr ಓಟದಲ್ಲಿ ಜಯಿಸಿದ ನಮ್ಮೂರ ಯುವತಾರೆ ರಿಶಾನ್ ಎಂಪಿ ಹಾಗು UIEO ಅಧ್ಯಕ್ಷರಾದ ನಜಿರ್ ಶಾಫಿಯವರು ಟೂರ್ನಮೆಂಟ್ ಉದ್ಘಾಟಿಸಿದರು, (GCL -2023) ಜರ್ಸಿಯನ್ನು ಇಸ್ಮಾಯಿಲ್ ಎಂ ಪಿ, ವಿನ್ನರ್ಸ್ & ರನ್ನರ್ಸ್ ಟ್ರೋಫಿಯನ್ನು ರಿಜ್ವಾನ್ ಜುಬೈಲ್ ಮತ್ತು ಝಹೀರ್ ತಂಗಳ್ ನೆರವೇರಿಸಿದರು.ತಂಡಗಳ ಮತ್ತು ಟೂರ್ನಮೆಂಟ್ ಪ್ರಾಯೋಜಕರಾದ ಹ್ಯಾರಿಸ್ ಕಜ, ಸಿನಾನ್ ತಂಗಳ್, ಬಷೀರ್ ಝಮಿಲ್, ಇಸ್ಮಾಯಿಲ್ ಎಂ ಪಿ, ತಸೀಮ್ ತಂಗಳ್, ಪಾಲ್ಗೊಂಡರು ಮತ್ತು ವೇದಿಕೆಯನ್ನು ಮೈದಾನವನ್ನು ಉದ್ಯಾವರದ ಪ್ರವಾಸಿ ಪುಟಾಣಿಗಳು ರಂಗೇರಿಸಿದರು.