ಮಂಜೇಶ್ವರದಲ್ಲಿ ಕೇರಳ ದಸ್ತಾವೇಜು ಬರಹಗಾರರ ಅಸೋಸಿಯೇಷನ್ ಮಂಜೇಶ್ವರ ಘಟಕದ ಸಮ್ಮೇಳನ.
ಡಿಸೆಂಬರ್ 02, 2023
0
ಮಂಜೇಶ್ವರದಲ್ಲಿ ಕೇರಳ ದಸ್ತಾವೇಜು ಬರಹಗಾರರ ಅಸೋಸಿಯೇಷನ್ ಮಂಜೇಶ್ವರ ಘಟಕದ ಸಮ್ಮೇಳನ.
ಮಂಜೇಶ್ವರ: ಕೇರಳ ದಸ್ತಾವೇಜು ಬರಹಗಾರರ ಅಸೋಸಿಯೇಷನ್ ಮಂಜೇಶ್ವರ ಘಟಕದ ಸಮ್ಮೇಳನ ಮಂಜೇಶ್ವರ ಶ್ರೀ ಮದನಂತೇಶ್ವರ ದೇವಸ್ಥಾನದ ಬಳಿ ಶ್ರೀ ಅನಂತ ಯಾತ್ರಿ ಸಭಾಂಗಣದಲ್ಲಿ ಜರಗಿತು. ಮಂಜೇಶ್ವರ ಬ್ಲೋಕ್ ಪಂಚಾಯಿತಿನ ಉಪಾಧ್ಯಕ್ಷರಾದ ಮೊಹಮ್ಮದ್ ಹನೀಫ್ ಪಿ. ಕೆ. ರವರು ಸಮ್ಮೇಳನವನ್ನು ಉದ್ಘಾಟಿಸಿದರು. ಅಸೋಸಿಯೇಷನ್ ನ ರಾಜ್ಯ ಉಪಾಧ್ಯಕ್ಷರಾದ ಸುನಿಲ್ ಕುಮಾರ್ ಕೊಟ್ಟರ, ಜಿಲ್ಲಾ ಅಧ್ಯಕ್ಷರಾದ ಪಿ. ಪಿ. ಕುಂಞಿ ಕ್ರೃಷ್ಣನ್, ಜಿಲ್ಲಾ ಉಪಾಧ್ಯಕ್ಷರುಗಳಾದ ಕರಿಂಬಿಲ ಲಕ್ಷ್ಮಣ ಪ್ರಭು, ಪಿ. ರಾಜೇಶ್ ಪೈ. ಜಿಲ್ಲಾ ಕೋಶಾಧಿಕಾರಿ ವಿ. ವಿ. ವಿನೋದ್ ಮುಂತಾದವರು ಮಾತನಾಡಿದರು. ಮಂಜೇಶ್ವರ ಘಟಕದ ಅಧ್ಯಕ್ಷರಾದ ಸಿ.ಎಚ್. ಗಣೇಶ್ ಅಧ್ಯಕ್ಷತೆ ವಹಿಸಿದರು. ಯೂನಿಟ್ ಕಾರ್ಯದರ್ಶಿಯಾದ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿ, ಕವಿತಾ ಆಚಾರ್ಯ ಧನ್ಯವಾದವಿತ್ತರು.