AIKS ಕಿಸಾನ್ ಸಭಾ ಪೈವಳಿಕೆ ನೇತ್ರತ್ವದಲ್ಲಿ ಪೈವಳಿಕೆಯಲ್ಲಿ "AIKS ಪೈವಳಿಕೆ ಪಂಚಾಯತ್ ಸಮಾವೇಶ".
ಜೂನ್ 17, 2024
0
AIKS ಕಿಸಾನ್ ಸಭಾ ಪೈವಳಿಕೆ ನೇತ್ರತ್ವದಲ್ಲಿ ಪೈವಳಿಕೆಯಲ್ಲಿ "AIKS ಪೈವಳಿಕೆ ಪಂಚಾಯತ್ ಸಮಾವೇಶ".
ಪೈವಳಿಕೆ : (AIKS)
ಕಿಸಾನ್ ಸಭಾ ಪೈವಳಿಕೆ ನೇತ್ರತ್ವದಲ್ಲಿ AIKS ಪೈವಳಿಕೆ ಪಂಚಾಯತ್ ಸಮಾವೇಶ ಸಿಪಿಐ ಪೈವಳಿಕೆ ಲೋಕಲ್ ಕಮಿಟಿ ಆಫೀಸ್ ಜರಗಿತು. ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ್ ಬಳ್ಳಾಗುಡೆಲ್ ಕೇರಳ ಸರಕಾರದಿಂದ ರೈತರಿಗೆ ಸಿಗುವ ಸವಲತ್ತುಗಳನ್ನು ಪಾರದರ್ಶಕವಾಗಿ ನೀಡುವಲ್ಲಿ ಕೃಷಿ ಅಧಿಕಾರಿಗಳಿಗೆ ಶ್ರಮಿಸಬೇಕು . ಜಿಲ್ಲಾ ಕಮಿಟಿ ಸದಸ್ಯರಾದ ರಾಮಚಂದ್ರ, ಅಜಿತ್ ಎಂ ಸಿ ಲಾಲ್ ಬಾಗ್ ಮಂಜೇಶ್ವರ ಮಂಡಲ aiks ಅಧ್ಯಕ್ಷ ಲಾರೆನ್ಸ್ ಡಿ ಸೋಜ, ಪೈವಳಿಕೆ ಪಂಚಾಯತ್ ಸದಸ್ಯ ಸುನಿತಾ ವಲ್ಟಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಚನಿಯ ಕೊಮ್ಮಂಗಳ ವಹಿಸಿದರು. ರಾಧಾಕೃಷ್ಣ ಭಟ್ ಸ್ವಾಗತಿಸಿ ಅಶ್ವಥ್ ಪೂಜಾರಿ ಲಾಲ್ ಬಾಗ್ ವಂದಿಸಿದರು. ನೂತನ ಸಮಿತಿಗೆ ಆಯ್ಕೆಯಾದ ಸದಸ್ಯರನ್ನು ಅಭಿನಂದನೆ ಮಾಡಲಾಯಿತು. ರೈತ ಸಂಘದ ನೂತನ ಅಧ್ಯಕ್ಷರಾಗಿ ಚನಿಯ ಕೊಮ್ಮಂಗಳ ಪ್ರದಾನ ಕಾರ್ಯದರ್ಶಿ ಯಾಗಿ ರಾಧಾಕೃಷ್ಣ ಭಟ್, ಉಪಾಧ್ಯಕ್ಷರಾಗಿ ಸಂಜೀವ ಶೆಟ್ಟಿ ಚಿಪ್ಪಾರು , ಅಬ್ದುಲ್ ಸಮದ್ ಬಿ ಎ, ಆನಂದ್ ಅಡ್ಕತಿಮಾರ್ ಸಹ ಕಾರ್ಯದರ್ಶಿ ವಲ್ಟಿ ಡಿ ಸೋಜ ರೇಖಾ ಚಿಪ್ಪಾರ್. ಸದಸ್ಯರಾಗಿ ಅಶ್ವಥ್ ಪೂಜಾರಿ ಲಾಲ್ ಬಾಗ್, ವಿಜಯ ಪೆರ್ಮುದೆ, ಈಶ್ವರ್ ನಾಯ್ಕ್ ಪೆರ್ಮುದೆ, ಹನೀಫ್ ಪೆರ್ಮುದೆ, ನಾರಾಯಣ ಪಾಟಾಲಿ ಮಾಣಿ ಆಯ್ಕೆ ಮಾಡಲಾಯಿತು. ಪೈವಳಿಕೆ ಕೃಷಿ ಅಧಿಕಾರಿಯನ್ನು ನೇಮಿಸಬೇಕು ಮತ್ತು ಬಾಕಿ ಇರುವ ಕೃಷಿ ಪಿಂಚಣಿಯನ್ನು ಆದಷ್ಟು ಬೇಗ ನೀಡಬೇಕು. ಸಮ್ಮೇಳನದಲ್ಲಿ ನಿರ್ಣಯಯನ್ನು ಕೈಗೊಳ್ಳಲಾಯಿತು.