ಕೇರಳದ ನಾಡ ಹಬ್ಬ ಓಣಂ ಗೆ "ಪೂಕಳಂ" ನೊಂದಿಗೆ ಸ್ವಾಗತ. ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ನ ವಿವಿಧ ಬ್ರಾಂಚ್ ಗಳಲ್ಲಿ ಮನಸೂರೆಗೊಂಡ ಆಕರ್ಷಕ "ಪೂಕಳಂ".
ಸೆಪ್ಟೆಂಬರ್ 14, 2024
0
ಕೇರಳದ ನಾಡ ಹಬ್ಬ ಓಣಂ ಗೆ "ಪೂಕಳಂ" ನೊಂದಿಗೆ ಸ್ವಾಗತ. ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ನ ವಿವಿಧ ಬ್ರಾಂಚ್ ಗಳಲ್ಲಿ ಮನಸೂರೆಗೊಂಡ ಆಕರ್ಷಕ "ಪೂಕಳಂ".
ಮಂಜೇಶ್ವರ: ಕೇರಳದ ನಾಡ ಹಬ್ಬ ಓಣಂನ್ನು ನಾಡಿನ ಜನತೆ ಸಂಭ್ರಮದಿಂದ ಸ್ವಾಗತಿಸುತ್ತಿದ್ದು, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ನಲ್ಲಿ ಇಂದು ಬೆಳಗ್ಗೆ ಓಣಂ ಪೂಕಳಂ ರಚಿಸಿ, ಬ್ಯಾಂಕ್ ಗೆ ಆಗಮಿಸಿದ ಗ್ರಾಹಕರಿಗೆ ಪಾಯಸ ವಿತರಿಸುವ ಮೂಲಕ ಓಣಂ ಹಬ್ಬವನ್ನು ಆಚರಿಸಿದರು. ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರ ಬದಾಜೆ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯದರ್ಶಿ ರಾಜನ್ ನಾಯರ್ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಹೊಸಂಗಡಿ ಬ್ರಾಂಚ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ನ ಅಧ್ಯಕ್ಷರಾದ ರಾಮಚಂದ್ರ ಎಸ್. ಬಡಾಜೆ ದೀಪ ಬೆಳಗಿಸಿ, ಪೂಕಳಂ ವೀಕ್ಷಣೆಗೆ ಚಾಲನೆ ನೀಡಿದರು. ಈ ವೇಳೆ ಬ್ಯಾಂಕ್ ಉಪಾಧ್ಯಕ್ಷ ವಿಜಯ ಕನಿಲ, ಕಾರ್ಯದರ್ಶಿ ರಾಜನ್ ನಾಯರ್, ಬ್ರಾಂಚ್ ಮೆನೇಜರ್ ಗಣೇಶ್ ಎಂ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕುಂಜತ್ತೂರು ಶಾಖೆಯ ಬ್ಯಾಂಕ್ ನಲ್ಲಿ ಪೂಕಳಂ ರಚಿಸಲಾಯಿತು. ಬ್ಯಾಂಕ್ ಉಪಾಧ್ಯಕ್ಷ ವಿಜಯ ಕನಿಲ, ಜತೆ ಕಾರ್ಯದರ್ಶಿ ಕೃಷ್ಣಪ್ಪ ಕೆ, ಬ್ರಾಂಚ್ ಮೆನೇಜರ್ ಶಿವಪ್ರಸಾದ್ ಕೆ. ಆರ್, ಗೀತ ಕುಮಾರಿ, ಸುಮನಾ ನಾಯಕ್ ಸಿಬ್ಬಂದಿಗಳು, ಗ್ರಾಹಕರು ಭಾಗವಹಿಸಿದರು. ಬಡಾಜೆ ಬ್ರಾಂಚ್ ನಲ್ಲಿ ನಡೆದ ಪೂಕಳಂ ನಲ್ಲಿ ಬ್ರಾಂಚ್ ಮೆನೇಜರ್ ಜಯಶ್ರೀ, ಸಿಬ್ಬಂದಿಗಳು ಹಾಗೂ ಗ್ರಾಹಕರು ಭಾಗವಹಿಸಿದರು.