ಮಂಜೇಶ್ವರದ ವಿವಿಧೆಡೆ ಭಕ್ತಿ ಸಂಭ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ. ವಿವಿಧ ಕಡೆಗಳಲ್ಲಿ ಪ್ರತಿಷ್ಟಾಪನೆಗೊಂಡ ಮಹಾ ಗಣಪ.
ಸೆಪ್ಟೆಂಬರ್ 07, 2024
0
ಮಂಜೇಶ್ವರದ ವಿವಿಧೆಡೆ ಭಕ್ತಿ ಸಂಭ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ. ವಿವಿಧ ಕಡೆಗಳಲ್ಲಿ ಪ್ರತಿಷ್ಟಾಪನೆಗೊಂಡ ಮಹಾ ಗಣಪ.
ಮಂಜೇಶ್ವರ: ಪ್ರಪಂಚದಾದ್ಯಂತ ಇಂದು ಆದಿ ದೇವ ಗಣಪನ ಹಬ್ಬವನ್ನು ಭಕ್ತಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮಂಜೇಶ್ವರದ ವಿವಿಧೆಡೆ ಗಣಪನ ಸ್ತುತ್ತಿಯೊಂದಿಗೆ, ಭಕ್ತಿಯ ಪರಾಕಾಷ್ಠೆಯೊಂದಿಗೆ ಶ್ರೀ ಗಣೇಶ ಚತುರ್ಥಿಯ ಹಬ್ಬವನ್ನು ಗಣೇಶೋತ್ಸವವಾಗಿ ಇಂದು ಆಚರಿಸುತ್ತಿದ್ದು, ಆ ಪ್ರಯುಕ್ತ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ 44 ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವಕ್ಕೆ ಶ್ರೀ ಗಣಪನ ವಿಗ್ರಹ ಪ್ರತಿಷ್ಠೆಯಾಗಿ ವಿಶೇಷ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ದೊರೆಯಿತು. ಬಳಿಕ ಸಮಿತಿ ಅಧ್ಯಕ್ಷ ನ್ಯಾ. ನವೀನ್ ರಾಜ್ ಕೆಜೆ ಧ್ವಜಾರೋಹಣಗೈದರು. ಸಾಮಾಜಿಕ ಕಾರ್ಯಕರ್ತ ತುಳಸಿದಾಸ್ ಮಂಜೇಶ್ವರ ಕ್ರೀಡಾ ಸ್ಪರ್ಧೆಗಳಿಗೆ ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಬಳಿಕ ವಿವಿಧ ಕ್ರೀಡಾ ಸ್ಪರ್ಧೆಗಳು ಪ್ರಾರಂಭಗೊಂಡವು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ವರ್ಕಾಡಿ ಸುಂಕದಕಟ್ಟೆ ಶ್ರೀ ದುರ್ಗಾ ಪರಮೇಶ್ವರೀ ಭಜನಾ ಮಂದಿರದಲ್ಲಿ ನಡೆಯುತ್ತಿರುವ 42 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಇಂದು ಬೆಳಗ್ಗೆ ಪೂಜಿಸಲ್ಪಟ್ಟ ಮಹಾ ಗಣಪ. ವರ್ಕಾಡಿ ಬಾವಳಗುಲಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಇಂದು ನಡೆಯುತ್ತಿರುವ 10 ನೇ ವರ್ಷದ ದಶಮಾನೋತ್ಸವದ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಮಹಾಗಣಪ. ಮದಂಗಲ್ಲುಕಟ್ಟೆ ಶ್ರೀ ಮಹಾಗಣಪತಿ ಭಜನಾ ಮಂದಿರದಲ್ಲಿ ನಡೆಯುತ್ತಿರುವ 44 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಮಹಾ ಗಣಪ. ಸಂತಡ್ಕದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 20 ನೇ ವರ್ಷದ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಮಹಾ ಗಣಪ.ಬೋರ್ಕಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುತ್ತಿರುವ ಮಹಾ ಗಣಪ.43 ನೇ ವರ್ಷದ ದೈಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಪೂಜಿತ ಗಣಪ