ಕುಂಬಳೆ ಒಳಯಂ ಮಖಾಂ ಮಸೀದಿಯಲ್ಲಿ 5 ವರ್ಷಗಳಿಗೊಮ್ಮೆ ನಡೆಯುವ ಉದಯಾಸ್ತಮಾನ ಉರೂಸ್ ಏ.24 ರಿಂದ ಮೇ.10 ರ ವರೆಗೆ.
ಏಪ್ರಿಲ್ 23, 2025
0
ಇಂದಿನಿಂದ ವಳಯಂ ಮತ ಪ್ರಭಾಷಣ.
ಕುಂಬಳೆ: ಚರಿತ್ರ ಪ್ರಸಿದ್ಧವಾದ ಒಳಯಂ ಮಖಾಂ ಮಸೀದಿ ಪರಿಸರದಲ್ಲಿ ಅಂತ್ಯ ವಿಶ್ರಮ ಗೊಳ್ಳುತ್ತಿರುವ ವಲಿಯುಲ್ಲಾಹಿ ರವರ ಹೆಸರಲ್ಲಿ 5 ವರ್ಷಗಳಿಗೊಮ್ಮೆ ನಡೆಸುವ ಉದಯಾಸ್ತಮಾನ ಉರೂಸ್ ಏ.24 ರಿಂದ ಮೇ.10 ರ ವರೆಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಪದಾಧಿಕಾರಿಗಳು ಬುಧವಾರ ಸಂಜೆ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗುರುವಾರ ಬೆಳಿಗ್ಗೆ 10 ಕ್ಕೆ ಮಖಾಂ ಸಿಯಾರತ್ ಗೆ
ಸಯ್ಯದ್ ಕುಂಞಕೋಯ ತಂಘಳ್ ಒಳಯಂ ನೇತೃತ್ವ ವಹಿಸುವರು. 10.30 ಕ್ಕೆ ಜಮಾಅಯ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಅಡ್ಕ ಧ್ವಜಾರೋಹಣ ನೆರವೇರಿಸುವರು. ಹಾಜಿ ಫಕ್ರುದ್ದೀನ್ ಕುನಿಲ್ ಕಾರ್ಯಾಲಯ ಉದ್ಘಾಟಿಸುವರು.
ರಾತ್ರಿ 8ಕ್ಕೆ ನಡೆಯುವ ಪಾರಾಯಣಕ್ಕೆ ಹಾಫಿಜ್ ಮೊಹಮ್ಮದ್ ಅನ್ವರ್ ಒಳಯಂ ನೇತೃತ್ವ ವಹಿಸುವರು.ಸ್ಥಳದ ಖತೀಬ್ ಹಸ್ಸನ್ ದಾರಿಮಿ ಉಪಸ್ಥಿತರಿರುವರು. ಸಯ್ಯದ್ ಅಥಾವುಲ್ಲಾ ತಂಙಳ್ ಉದ್ಯಾವರ ಅಧ್ಯಕ್ಷತೆ ವಹಿಸುವರು.
ಸಯ್ಯದ್ ಮುನವ್ವರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸುವರು. ಕಾಸರಗೋಡು ಖಾಜಿ ಆಲಿಕುಟ್ಟಿ ಮುಸ್ಲಿಯಾರ್ ಮುಖ್ಯ ಅತಿಥಿಗಳಾಗಿರುವರು. ಲುಕ್ಕಾನುಲ್ ಹಕೀಂ ಸಖಾಫಿ ಪುಲ್ಲಾರ 'ಮರಣ' ವಿಷಯದಲ್ಲಿ ಮುಖ್ಯ ಭಾಷಣ ಮಾಡುವರು. ಶಾಸಕ ಎ. ಕೆ. ಎಂ. ಅಶ್ರಫ್, ಜಾಸಿಂ ವಾಫಿ (ಖತೀಬ್ ಅಡ್ಕ ಸುಬ್ ಹಾನ ಮಸೀದಿ),
ಜುನೈದ್ ಅಂಜದೀ (ಖತೀಬ್ ಮುಟ್ಟಂ ಜುಮಾ ಮಸೀದಿ), ಮಾಹಿನ್ ಮುಸ್ಲಿಯಾರ್ (ಮುದರಿ ಪೊಸೋಟ್ ), ಸಯ್ಯದ್ ರಷಾದಲಿ ಶಿಹಾಬ್ ತಂಙಳ್ ಪಾಣಕ್ಕಾಡ್(ಮುಹಮ್ಮದೀಯ ಕುಣಲ್ ಮುತಂ), ಶಬೀರ್ ಫೈಝಿ (ಖತೀಬ್ ಪೊಸೋಟ್ ಜುಮಾ ಮಸೀದಿ), ಅಬ್ದುಲ್ ಖಾದರ್ ಸಖಾಫಿ (ಮುದರಿಸ್ ಪಾಪಂಕೋಯ ನಗರ), ಜಹ್ಭರ್ ಬುಸ್ತಾನಿ (ಖತೀಬ್ ಇಚ್ಲಂಗೋಡು ಜುಮಾ ಮಸೀದಿ)
ಅಬ್ದುಲ್ ರಾಝಾಕ್ ಫೈಝಿ (ಖತೀಬ್ ಕುಂಬೋಲ್ ವಲಿಯ ಜುಮಾ ಮಸೀದಿ), ಅಬ್ದುಲ್ ರಝಾಕ್ ಆಝರಿ, ಉಮರ್ ಹುದವಿ, ಶಾಫಿ ಸಾದಿ, ಮುಹಮ್ಮದ್ ಸಖಾಫಿ ಪಾತೂರ್, ಸಯ್ಯದ್ ಅಲಿ ಮನ್ನಾನಿ, ಮಜೀದ್ ಅಮಾನಿ, ಅಬ್ದುಲ್ ರಶೇದ್ ಸಖಾಫಿ,
ಮುಹಮ್ಮದ್ ಆಲಿ ಆಪ್ತನಿ (ಮುಮಿಯ)
ಜುನೈದ್ ಫೈಝಿ ಉಪಸ್ಥಿತರಿರುವರು.
25 ರಂದು ಶುಕ್ರವಾರ ರಾತ್ರಿ ರಹ್ಮತುಲ್ಲಾ ಸಖಾಫಿ ಎಳಮರಂ ಅವರು ಅಲ್ಲಾಹುನ ಅವ್ಲಿಯಾಕಳ್ ವಿಷಯದಲ್ಲಿ, 26 ರಂದು ಶನಿವಾರ ರಾತ್ರಿ
ಸುಫಿಯಾನ್ ಬಾಖವಿ ಚಿರಿಯಂಗೀಝ್ ಅವರು
ಸ್ವರ್ಗವಗಾಶಿ, ಭಾನುವಾರ ರಾತ್ರಿ ಹನೀಫ್ ನಿಶಾಮಿ ಮೊಗ್ರಾಲ್ ಅವರು ವಿವಾಹದಲ್ಲಿ ಆಡಂಬರ
ವಿಷಯದಲ್ಲಿ , ಸೋಮವಾರ ರಾತ್ರಿ ಪೇರೋಡ್ ಅಬ್ದುಬ್ರಹ್ಮಾನ್ ಸಖಾಫಿ ಅವರು ಸುನ್ನತ್ ಜಮಾಅತ್ ವಿಷಯದಲ್ಲಿ, ಮಂಗಳವಾರ ರಾತ್ರಿ ಇ ಪಿ ಅಬೂಬಕರ್ ಅಳ್ಕಸಿಮಿ ಪಟನಾಪುರಂ ಅವರು ನಿಸ್ಕಾರಂ, ಬುಧವಾರ ರಾತ್ರಿ ಮುನೀರ್ ಹುಧವಿ ವಿಲಯಿಲ್ ಸಾವಿನ ನಂತರದ ಜೀವನ, ಗುರುವಾರ ಸಂಜೆ ನಮಾಜಿನ ನಂತರ ಸಯ್ಯದ್ ಮನ್ಸೂರ್ ತಂಙಳ್ ನೇತೃತ್ವದಲ್ಲಿ ಸ್ವಾಲತ್ ಮಜೆಲಿಸ್ ನಡೆದು,
ರಾತ್ರಿ 8 ರಿಂದ ಹಾಮಿದ್ ಯಾಸೀನ್ ಜಾಹರಿ ಕೊಲ್ಲಂ ಅವರಿಂದ ಸ್ವಲಾತಿನ ಮಹತ್ವದ ಬಗ್ಗೆ ಉಪನ್ಯಾಸ ನಡೆಯಲಿದೆ.
ಶುಕ್ರವಾರ ರಾತ್ರಿ ಶಫೀಕ್ ಬದ್ರಿ ಅಲ್ ಬಾಖವಿ ಕಡಕ್ಕಾಲ್ ಅವರಿಂದ ವ್ಯಾಪಾರದಲ್ಲಿ ಝಕಾತ್ ವಿಷಯದಲ್ಲಿ, ಶನಿವಾರ ರಾತ್ರಿ ಅನಸ್ ಅಮಾನಿ ಪುಷ್ಪಗಿರಿ ಅವರಿಂದ ಹೊಸ ತಲೆಮಾರಿನ ಯುವಕ, ಯುವತಿಯರು ವಿಷಯದಲ್ಲಿ, ಮೇ.4 ರಂದು ಭಾನುವಾರ ರಾತ್ರಿ ನೌಶಾದ್ ಬಾಖವಿ ಚಿರಯಣ್ಕೇಜ್ ಅವರಿಂದ ಪಳ್ಳಿ ಪರಿಪಾಲನೆ ವಿಷಯದಲ್ಲಿ, ಸೋಮವಾರ ರಾತ್ರಿ ಹಾಫಿಲ್ ಅಹ್ಮದ್ ಕಬೀರ್ ಬಾಖವಿ ಕಾಞ್ಞಾರ್ ಅವರಿಂದ ಇಸ್ಲಾಮಿನಲ್ಲಿ ದಂಪತಿ ವಿಷಯದಲ್ಲಿ, ಮಂಗಳವಾರ ರಾತ್ರಿ ಮಹಮ್ಮದ್ ಫಾಸಿಲ್ ನೂರಾನಿ ಅವರಿಂದ ಪುನ್ನಾರ ನಬಿ ವಿಷಯದಲ್ಲಿ, ಬುಧವಾರ ರಾತ್ರಿ ಯಸ್ ಯಸ್ ಸಮೀರ್ ದಾರಿಮಿ ಕೊಲ್ಲಂ ಅವರಿಂದ ಲಹರಿ ವಿಷಯದಲ್ಲಿ, ಮೇ.8 ರಂದು ಗುರುವಾರ ಸಂಜೆ ನಮಾಜಿನ ನಂತರ ಸಯ್ಯದ್ ಕೆ ಎಸ್ ಅಲಿ ತಂಙಳ್ ಕುಂಬೋಳ್ ಅವರಿಂದ ಖತ್ಮುಲ್ ಖುರ್ಹಾನ್ ನಡೆಯಲಿದೆ. ರಾತ್ರಿ ಸಮೂಹ ಮಾಧ್ಯಮ ಮತ್ತು ವಿಪತ್ತು ವಿಷಯದಲ್ಲಿ ನೌಫಾಲ್ ಸಖಾಫಿ ಕಳಸ ಉಪನ್ಯಾಸ ನೀಡುವರು. ಮೇ 9 ರಂದು ಶುಕ್ರವಾರ ರಾತ್ರಿ ಮತ ಲಕ್ಷ್ಯದ ಮಹತ್ವ ವಿಷಯದಲ್ಲಿ ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಉಪನ್ಯಾಸ ನೀಡುವರು. ಮೇ 10 ರಂದು ಶನಿವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಯ್ಯದ್ ಕುಂಞಕೋಯ ತಂಙಳ್ ಒಳಯಂ ಪ್ರಾರ್ಥನೆ ನಿರ್ವಹಿಸುವರು. ಅಬ್ದುಲ್ ರಹ್ಮಾನ್ ನಿಜಮೀ ಶಿರಿಯ ಉಪಸ್ಥಿತರಿರುವರು. ಸಯ್ಯದ್ ಕೆ. ಎಸ್. ಜಾಹ್ಫರ್ ಸ್ವಾದಿಕ್ ತಂಙಳ್ ಕುಂಬೋಳ್ ಉದ್ಘಾಟಿಸುವರು. ಮೊಹಮದ್ ಕೋಯಾ ತಂಙಳ್ ಜಮಾಲುಲೈಳಿ (ಖಾಝಿ ಕೋಝಿಕೋಡ್) ಉದ್ಘಾಟಿಸುವರು. ಸಿರಾಜುದ್ದೀನ್ ಅಲ್ ಖಾಸಿಮಿ ಪತನಪುರಂ ಮುಖ್ಯ ಭಾಷಣ ಮಾಡುವರು. ಗಣ್ಯರು ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಮೊಹಮ್ಮದ್ ಹಸನ್ ದಾರಿಮಿ, ಅಬ್ದುಲ್ ಸಮದ್ ಕಜೆ, ಅಶ್ರಫ್ ಒ.ಎಂ., ಮೊಹಮ್ಮದ್ ಹಾಜಿ ಕೋಟೆ, ಅಬ್ದುಲ್ ರಸಾಕ್ ವಾನಂದೆ, ಯೂಸುಫ್ ತರವಾಡು ಉಪಸ್ಥಿತರಿದ್ದರು.