ಜಮ್ಮು ಕಾಶ್ಮೀರದ ಪಹಲ್ಗಾಮ್ ಮೃತಪಟ್ಟ ಪ್ರವಾಸಿ ಯಾತ್ರಿಕರಿಗೆ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ. ಭಯೋತ್ಪಾದಕರನ್ನು ಮಟ್ಟ ಹಾಕಲು ಆಗ್ರಹ.
ಏಪ್ರಿಲ್ 23, 2025
0
ಜಮ್ಮು ಕಾಶ್ಮೀರದ ಪಹಲ್ಗಾಮ್ ಮೃತಪಟ್ಟ ಪ್ರವಾಸಿ ಯಾತ್ರಿಕರಿಗೆ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ. ಭಯೋತ್ಪಾದಕರನ್ನು ಮಟ್ಟ ಹಾಕಲು ಆಗ್ರಹ.
ಕುಂಬಳೆ: ಜಮ್ಮು - ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರವಾದಿ ಆಕ್ರಮಣದಲ್ಲಿ ಮೃತಪಟ್ಟ ಪ್ರವಾಸಿ ಯಾತ್ರಿಕರ ಶ್ರದ್ಧಾಂಜಲಿಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕುಂಬಳೆ ಬ್ಲಾಕ್ ಮತ್ತು ಭಾರತೀಯ ಯುವ ಕಾಂಗ್ರೆಸ್ ಕುಂಬಳೆ ಬ್ಲಾಕ ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ ಮತ್ತು ಮೇಣದ ಬತ್ತಿ ಉರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿತು. ಬ್ಲಾಕ್ ಕಾಂಗ್ರೆಸ್ ನಿಯೋಜಕ ಅಧ್ಯಕ್ಷರಾದ ಸುಂದರ ಆರಿಕ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಬ್ಲಾಕ್ ಅಧ್ಯಕ್ಷ ಲಕ್ಷ್ಮಣ ಪ್ರಭು, ಮಂಡಲ ಅಧ್ಯಕ್ಷ ರವಿ ಪೂಜಾರಿ, ಮಂಜೇಶ್ವರ ನಿಯೋಜಕ ಮಂಡಲ ಕಾರ್ಮಿಕ ಕಾಂಗ್ರೆಸ್ ಅಧ್ಯಕ್ಷ ಸತ್ಯನ್ ಉಪ್ಪಳ, ಮಂಜೇಶ್ವರ ನಿಯೋಜಕ ಮಂಡಲ ಯುವ ಕಾಂಗ್ರೆಸ್ ಅಧ್ಯಕ್ಷ ಜುನೈದ್ ಉರ್ಮಿ, ಕಾರ್ಮಿಕ ಕಾಂಗ್ರೆಸ್ ನೇತಾರರಾದ ಸಜಿ ಪೈವಳಿಕೆ, ಕಮರುದೀನ್ ಪಾಡ್ಲಾಡ್ಕ , ದಲಿತ ಕಾಂಗ್ರೆಸ್ ನ ಕೇಶವ ದರ್ಬಾರ್ ಕಟ್ಟೆ, ಮಾತನಾಡಿ ಉಗ್ರರ ಕೃತ್ಯವನ್ನು ಉಗ್ರವಾಗಿ ಖಂಡಿಸಿದರು. ಶ್ರದ್ಧಾಂಜಲಿ ಸಭೆಯಲ್ಲಿ ಥಾಮಸ್ ರಾರ್ಡಿಗ್ರಾಸ್, ಡಾಲ್ಫಿ ಡಿಸೋಜಾ, ಮೋಹನ್ ರೈ ಕಯ್ಯಾರ, ಸಚ್ಚಿದಾನಂದ ಶೆಟ್ಟಿ ಕಳ್ಳಿಗೆ, ಶೇರಿಲ್ ಕಯ್ಯ೦ಕುಡೇಲ್, ದಯಾನಂದ ಬಾಡೂರು, ರಫೀಕ್ ಕುಂಟಾರ್, ಮೊಹಮ್ಮದ್ ಪುತ್ತಿಗೆ, ಮಹಾರಾಜ ಪೈವಳಿಕೆ, ಹರೀಶ್ ಮುಳಿಯಡ್ಕ, ಜಯಂತ ಕುಂಟೆಗರಡ್ಕ, ರವಿರಾಜ್ ಕುಂಟೆಗರಡ್ಕ, ದಿನೇಶ್ ದರ್ಬಾರ್ ಕಟ್ಟೆ, ಲತೀಫ್ ಪಿಕೆ ನಗರ, ಹಂಸ ಮೊಗ್ರಾಲ್, ಮಾನ ಪಾಟಾಳಿ, ಮುಂತಾದ ನೇತಾರರು ಭಾಗವಹಿಸಿದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಶೆಟ್ಟಿ ಕುಂಬಳೆ ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ಉಮೇಶ್ ಮಾಸ್ಟರ್ ಧನ್ಯವಾದವಿತ್ತರು.