ಪಾಕಿಸ್ತಾನದ ಶಿಖಂಡಿ ಯುದ್ಧಕ್ಕೆ ಕಾಂಗ್ರೆಸ್ ಖಂಡನೆ. ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಅಮಾಯಕ ಪ್ರವಾಸಿಗರಿಗೆ ಕಾಂಗ್ರೆಸ್ ನಿಂದ ಹೊಸಂಗಡಿಯಲ್ಲಿ ಶ್ರದ್ಧಾಂಜಲಿ.
ಏಪ್ರಿಲ್ 23, 2025
0
ಪಾಕಿಸ್ತಾನದ ಶಿಖಂಡಿ ಯುದ್ಧಕ್ಕೆ ಕಾಂಗ್ರೆಸ್ ಖಂಡನೆ. ಭಯೋತ್ಪಾದಕರ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಅಮಾಯಕ ಪ್ರವಾಸಿಗರಿಗೆ ಕಾಂಗ್ರೆಸ್ ನಿಂದ ಹೊಸಂಗಡಿಯಲ್ಲಿ ಶ್ರದ್ಧಾಂಜಲಿ.
ಮಂಜೇಶ್ವರ: ಕೈಲಾಗದ ದಿವಾಳಿಯೆದ್ದ ಪಾಕಿಸ್ತಾನ ಸರ್ಕಾರ ಕೂಲಿ ಸಿಪಾಯಿಗಳನ್ನು ಮುಂದಿಟ್ಟುಕೊಂಡು ತನ್ನ ಛಾಯಾ ಯುದ್ಧದ ಚಾಳಿ ಮುಂದುವರಿಸಿದ್ದು, ದೇಶದ ನಾಗರಿಕರ ಬಲಿದಾನಕ್ಕೆ ಪಾಕಿಸ್ತಾನ ಮರೆಯಲಾಗದ ಬೆಲೆ ತೆರಬೇಕಾದೀತು ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮುಹಮ್ಶದ್ ಡಿಎಂಕೆ ಹೇಳಿದ್ದಾರೆ.
ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹೊಸಂಗಡಿ ಟೌನ್ ನಲ್ಲಿ
ಜಮ್ಶು ಕಾಶ್ಮೀರದ ಪೆಹಲ್ ಗಾಂವ್ ನಲ್ಲಿ ಭಯೋತ್ಪಾಕರ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಅಮಾಯಕ ಪ್ರವಾಸಿಗರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಕ್ಷದ ನಾಯಕರಾದ ಶ್ರೀ ಚಂದ್ರಶೇಖರ ಶೆಟ್ಟಿ ಬೆಜ್ಜ, ಖಲೀಲ್ ಬಜಾಲ್, ಫಾರೂಕ್ ಶಿರಿಯ, ನಾಗೇಶ್ ಮಂಜೇಶ್ವರ, ಫ್ರಾನ್ಸಿಸ್ ಡಿ'ಸೋಜಾ, ಹನೀಫ್ ಪಡಿಂಞಾರ್, ಬಾಬು ಬಂದ್ಯೋಡು, ಗಣೇಶ್ ಪಾವೂರು, ವಸಂತರಾಜ್ ಶೆಟ್ಟಿ,ವಿಕ್ಟರ್ ಡಿಸೋಜ, ಮುಸ್ತಫಾ ಮಂಜೇಶ್ವರ, ಮುಹಮ್ಮದ್ ಸೀಗಂಡಡಿ, ಮುಹಮ್ಮದ್ ದೀನಾರ್ ನಗರ್, ಶಫೀಕ್ ಧರ್ಮನಗರ, ಸಲಾಂ ಹೊಸಂಗಡಿ,ಸೂಪಿ ಜಮಾಲ್,ಫೈರೋಝ್ ಪಡಿಂಞಾರ್, ಅಬ್ದುಲ್ ರಹೀಂ ಹಾಜಿ,ಹನೀಫ್ ಪೆರಿಂಗಡಿ ಮುಂತಾದವರು ಉಪಸ್ಥಿತರಿದ್ದರು. ಭಯೋತ್ಪಾಕರ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಅಮಾಯಕರಿಗೆ ಮೊಂಬತ್ತಿ ಉರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ
ಭಯೋತ್ಪಾದನಾ ಚಟುವಟಿಕೆ ಪ್ರತಿರೋಧ ಪ್ರತಿಜ್ಞೆ ಕೈಗೊಳ್ಳಲಾಯಿತು.