ತುಳಸಿ ಪೂಜೆ ಸಮೀಪಿಸುತ್ತಿದ್ದಂತೆ ಮಂಜೇಶ್ವರದಲ್ಲಿ 7 ಅಡಿ ಎತ್ತರಕ್ಕೆ ಬೆಳೆದ ಬೃಹತಾಕಾರದ ತುಳಸಿ ಗಿಡ.
ನವೆಂಬರ್ 23, 2023
0
ತುಳಸಿ ಪೂಜೆ ಸಮೀಪಿಸುತ್ತಿದ್ದಂತೆ ಮಂಜೇಶ್ವರದಲ್ಲಿ 7 ಅಡಿ ಎತ್ತರಕ್ಕೆ ಬೆಳೆದ ಬೃಹತಾಕಾರದ ತುಳಸಿ ಗಿಡ.
ಮಂಜೇಶ್ವರ: ನಾಳೆ ತುಳಸಿ ಹಬ್ಬ (ಪೂಜೆ). ದೀಪಾವಳಿ ಕಳೆದ 12 ನೇ ದಿನದಲ್ಲಿ ತುಳಸಿ ಪೂಜೆ ನಡೆಯುವುದು ವಾಡಿಕೆ. ಮನೆ ಮಂದಿ ಈ ವೇಳೆ ತುಳಸಿ ಕಟ್ಟೆಯನ್ನು ಶುಭ್ರಗೊಳಿಸಿ, ಹೂವಿನಿಂದ ಅಲಂಕಾರ ಮಾಡಿ, ಹಣತೆ ದೀಪ ಬೆಳಗಿ, ಆರತಿ ಮಾಡಿ ಪೂಜಿಸುವ ಸಂಪ್ರದಾಯ ಪವಿತ್ರ ಹಿಂದೂ ಧರ್ಮದಲ್ಲಿದೆ. "ತುಳಸಿ" ಎಂಬ ಪವಿತ್ರ ಸಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತಿದ್ದು, ಹುಟ್ಟಿನಿಂದ ಇಡಿದು ಮರಣದ ವರೆಗೆ ಪ್ರತಿಯೊಂದು ವೈದಿಕ, ವಿಧಿ ವಿಧಾನಗಳಿಗೆ ತುಳಸಿ ಎಲೆ ಪ್ರಧಾನವಾಗಿದೆ. ಪೂಜೆ ಪುನಸ್ಕಾರಗಳಲ್ಲಿ ತುಳಸಿಯನ್ನು ಹೆಚ್ಚು ಬಳಕೆ ಮಾಡಲಾಗುತ್ತದೆ. ಮನೆಯಂಗಳದಲ್ಲಿ ನೆಟ್ಟು ಬೆಳೆಸುವ ತುಳಸಿ ಗಿಡವು ಸಾಮಾನ್ಯವಾಗಿ 2 ರಿಂದ 3 ಅಡಿ ಬೆಳೆಯುತ್ತದೆ. ಆದರೆ ಮಂಜೇಶ್ವರದ ರಾಗಂ ಜಂಕ್ಷನ್ ನ ನಿವಾಸಿಯೂ, ಹೊಸಂಗಡಿಯಲ್ಲಿ ಪತ್ರಿಕಾ ಏಜೆಂಟ್ ರಾಗಿರುವ ರಾಜನ್ ಎ.ಪಿ ಎಂಬವರ ಮನೆಯ ಅಂಗಳದಲ್ಲಿ ತುಳಸಿ ಗಿಡವೊಂದು 7 ಅಡಿ ಎತ್ತರಕ್ಕೆ ಬೆಳೆದು ನಿಂತಿದೆ. ಈ ಗಿಡವನ್ನು ನೋಡಿದ ಪರಿಸರ ನಿವಾಸಿಗಳು, ಗಿಡದ ಬೆಳವಣಿಗೆಯನ್ನು ಕಂಡು ಆಶ್ಚರ್ಯ ಚಕಿತರಾಗಿದ್ದಾರೆ. ಈ ಗಿಡವನ್ನು ರಾಜನ್ ರವರು ಕಳೆದ 8 ತಿಂಗಳ ಹಿಂದೆ ನೆಟ್ಟಿದ್ದರು. ಇದೀಗ ಗಿಡವು ಮನೆಯ ಎತ್ತರಕ್ಕೆ ಬೆಳೆಯುತ್ತಿದ್ದು, ನೆಲದಿಂದ 7 ಫೀಟ್ ಎತ್ತರವಿದೆ. ಇದರ ಬುಡಭಾಗ 3 ಸೆಂಟಿ ಮೀಟರ್ ತೋರವಿದೆ. ಈ ಬೃಹತ್ ಕಾರದ ಗಿಡವನ್ನು ವೀಕ್ಷಿಸಲೆಂದೇ ಹಲವರು ಆಗಮಿಸುತ್ತಿದ್ದಾರೆ.