ಕೇರಳ ರಾಜ್ಯ ಲಾಟರಿ ಪೂಜಾ ಬಂಪರ್ 12 ಕೋಟಿ ಈ ಬಾರಿ ಮಂಜೇಶ್ವರ ಭಾಗಕ್ಕೆ
ನವೆಂಬರ್ 22, 2023
0
ಕೇರಳ ರಾಜ್ಯ ಲಾಟರಿ ಪೂಜಾ ಬಂಪರ್ 12 ಕೋಟಿ ಈ ಬಾರಿ ಮಂಜೇಶ್ವರ ಭಾಗಕ್ಕೆ.
ಮಂಜೇಶ್ವರ: ಕೇರಳ ರಾಜ್ಯ ಲಾಟರಿಯ ಪೂಜಾ ಬಂಪರ್ ಡ್ರಾ ಇಂದು ನಡೆದಿದ್ದು, ಇದರಲ್ಲಿ ಪ್ರಥಮ ಬಹುಮಾನ 12 ಕೋಟಿ ರೂಪಾಯಿ JC - 253199 ನಂಬರ್ ಗೆ ಒಲಿದಿದೆ. ವರ್ಕಾಡಿ ಯ ಮಜೀರ್ಪಳ್ಳದಲ್ಲಿ ಲಾಟರಿ ಏಜೆಂಟ್ ಆಗಿರುವ (ಏಜೆನ್ಸಿ ಸಂಖ್ಯೆ S1443 ) ಮೇರಿಕುಟ್ಟಿ ಜೊಜೊ ಅವರು ಮಾರಾಟ ಮಾಡಿದ ಟಿಕೆಟ್ ಗೆ ಈ ಮೊದಲ ಬಹುಮಾನ ಬಂದಿರುತ್ತದೆ. ಆದರೆ 12 ಕೋಟಿಯ ಭಾಗ್ಯವಂತ ಯಾರು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ತಿರುವನಂತಪುರಂನಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಡ್ರಾ ನಡೆದಿದ್ದು, ಈ ಬಾರಿ 300 ರೂಪಾಯಿ ಟಿಕೆಟ್ ನಲ್ಲಿ 12 ಕೋಟಿ ಅಲ್ಲದೆ ಇತರ ಬಹುಮಾನಗಳು ಒಳಗೊಂಡಿದ್ದವು.