ಸಮುದಾಯದ ಸುಸ್ಥಿರ ಅಭಿವೃದ್ಧಿಗಾಗಿ ಮಹಲ್ ಸಬಲೀಕರಣ ಅಗತ್ಯ - ಸೈಫುಲ್ಲಾ ತಂಗಳ್.
ನವೆಂಬರ್ 23, 2023
0
ಸಮುದಾಯದ ಸುಸ್ಥಿರ ಅಭಿವೃದ್ಧಿಗಾಗಿ
ಮಹಲ್ ಸಬಲೀಕರಣ ಅಗತ್ಯ - ಸೈಫುಲ್ಲಾ ತಂಗಳ್.
ಮಂಜೇಶ್ವರ: ಮುಸ್ಲಿಂ ಸಮುದಾಯದ ಸರ್ವತೋಮುಖ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಮಹಲ್ ಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದು ಅಗತ್ಯವಾಗಿದ್ದು, ಇದಕ್ಕಾಗಿ ವಿಚಾರ ಸಂಕಿರಣಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಅಧ್ಯಕ್ಷ ಯು.ಕೆ.ಸೈಫುಲ್ಲಾ ತಂಗಲ್ ಹೇಳಿದರು, ಮಂಜೇಶ್ವರ ಪಂಚಾಯತ್ ಸುನ್ನೀ ಮಹಲ್ ಫೆಡರೇಶನ್ ಆಯೋಜಿಸಿದ್ದ ಮಹಲ್ ಶಕ್ತಿಕರಣ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪೊಸೋಟ್ ಜಮಾತ್ ಮದರಸಾ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಎಂ. ಎಫ್ ಅಧ್ಯಕ್ಷ ಉಸ್ಮಾನ್ ಹಾಜಿ ಅಧ್ಯಕ್ಷತೆ ವಹಿಸಿದ್ದರು, ತೊಟ್ಟಿ ಮಾಹಿನ್ ಮುಸ್ಲಿಯಾರ್ ಪ್ರಾರ್ಥನೆ ನಡೆಸಿದರು ಎಸ್.ಎಂ.ಎಫ್. ಜಿಲ್ಲಾ ಸಂಘಟಕ ರಶೀದ್ ಚಪ್ಪರಪದವ ನಿರೂಪಿಸಿ, ಆರ್.ಕೆ. ಬಾವ ಹಾಜಿ, ಮುಹಮ್ಮದ್ ಫೈಝಿ ಕಜ, ಫಾರೂಕ್ ಮೌಲವಿ, ಮಾತನಾಡಿದರು, ಅಲಿ ಮಾಸ್ಟರ್ ಸ್ವಾಗತಿಸಿ, ಬಿ.ಎಸ್.ಇಬ್ರಾಹಿಂ ಧನ್ಯವಾದವಿತ್ತರು.