ಮುಂಬೈಯ ಪ್ರಮುಖ ಉದ್ಯಮಿ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರು ಮಧೂರು ಕ್ಷೇತ್ರಕ್ಕೆ ಸಮರ್ಪಿಸಲಿರುವ ನೂತನ ಮಹಾದ್ವಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮ.
ನವೆಂಬರ್ 25, 2023
0
ಮುಂಬೈಯ ಪ್ರಮುಖ ಉದ್ಯಮಿ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರು ಮಧೂರು ಕ್ಷೇತ್ರಕ್ಕೆ ಸಮರ್ಪಿಸಲಿರುವ ನೂತನ ಮಹಾದ್ವಾರಕ್ಕೆ ಶಿಲಾನ್ಯಾಸ ಕಾರ್ಯಕ್ರಮ.
ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಜೀರ್ಣೋದ್ದಾರ ಕಾರ್ಯಗಳ ಭಾಗವಾಗಿ ಮುಂಬೈಯ ಪ್ರಮುಖ ಉದ್ಯಮಿ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರು ನೂತನವಾಗಿ ಕ್ಷೇತ್ರಕ್ಕೆ ಸಮರ್ಪಿಸುವ ಮಹಾದ್ವರದ ಶಿಲಾನ್ಯಾಸ ಕಾರ್ಯಕ್ರಮವನ್ನು ಸ್ವಾಮೀಜಿಗಳವರ ದಿವ್ಯ ಉಪಸ್ಥಿತಿಯಲ್ಲಿ ಇಂದು ಬೆಳಗ್ಗೆ ಕ್ಷೇತ್ರದಲ್ಲಿ ನೆರವೇರಿಸಿದರು. ಬಳಿಕ ಮಹಾದ್ವಾರದ ನೀಲಚಿತ್ರಣವನ್ನು ಅನಾವರಣಗೊಳಿಸುದರು. ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತ ಶ್ರೀಪಾದಂಗಳವರು, ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ ನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ದೀಪ ಬೆಳಗಿಸಿ, ಉದ್ಘಾಟಿಸಿ, ಆಶೀರ್ವಚನವಿತ್ತರು. ವೇದಿಕೆಯಲ್ಲಿ ತಂತ್ರಿವರ್ಯರಾದ ಬ್ರಹ್ಮ ಶ್ರೀ ಉಳಿಯತ್ತಾಯ ವಿಷ್ಣು ಆಸ್ರರು, ಮಧೂರು ಕ್ಷೇತ್ರದ ಅನುವಂಶಿಕ ಮೊಕ್ತೇಸರ ಮಾಯಿಪ್ಪಾಡಿ ಅರಮನೆಯ ಶ್ರೀ ದಾನಮಾರ್ತಾಂಡ ವರ್ಮ ರಾಜ ಯಾನೆ ರಾಮಂತರಸುಗಳು, ಶಿಲಾನ್ಯಾಸವನ್ನುಗೈದ ನೂತನ ಮಹಾದ್ವಾರದ ಸೇವಾ ಕರ್ತೃ ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು, ಕನ್ಯಾನ, ವಿವಿಧ ಕ್ಷೇತ್ರಗಳ, ಧಾರ್ಮಿಕ ಮುಂದಾಳುಗಳಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಕೆ. ಗೋಪಾಲಕೃಷ್ಣ, ಬಿಜು, ಪಿ.ನಂದ ಕುಮಾರ್, ಕಿಶೋರ್ ಆಳ್ವ, ಸಿ. ಎ ಸುಧೀರ್ ಕುಮಾರ್ ಶೆಟ್ಟಿ ಎಣ್ಮಕಜೆ, ಕೊಟ್ಟಾರ ವಾಸುದೇವನ್, ಶಂಕರ್ ರೈ ಮಾಸ್ಟರ್, ಕೆ.ಕೆ ಶೆಟ್ಟಿ, ಕೆ. ಮೋನಪ್ಪ ಭಂಡಾರಿ, ಶಶಿಧರ್ ಶೆಟ್ಟಿ, ಡಾ. ಬಿ.ಎಸ್ ರಾವ್, ಶ್ರೀಮತಿ ಸ್ಮಿಜಾ ವಿನೋದ್, ಕೃಷ್ಣ ಉಪಾಧ್ಯಾಯ, ಮೊದಲಾದವರು ಉಪಸ್ಥಿತರಿದ್ದು, ಶುಭಾಶಂಸನೆಗೈದರು. ನವೀಕರಣ ಸಮಿತಿ ಅಧ್ಯಕ್ಷ ಯು. ಟಿ. ಆಳ್ವ ಅಧ್ಯಕ್ಷತೆ ವಹಿಸಿದರು. ಪಿ. ಶ್ರೀ ಕೃಷ್ಣ ಉಪಾಧ್ಯಾಯ ಹಾಗೂ ಬಲ್ಲಪದವು ಶರ್ಮಾ ಪ್ರಾರ್ಥನೆ ಹಾಡಿ, ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಸ್ವಾಗತಿಸಿ, ನ್ಯಾಯವಾದಿ ಗಂಗಾಧರ್ ಕೊಂಡೆವೂರು, ದಿನಕರ್ ಬಿ.ಎಂ, ಹರೀಶ್ ಶೆಟ್ಟಿ ಮಾಡ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ನಿರೂಪಿಸಿ, ಗಿರೀಶ್ ಕೆ ವಂದಿಸಿದರು. ಬಳಿಕ ಅನ್ನ ಸಂತರ್ಪಣೆ ನಡೆಯಿತು.