ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ 76 ನೇ ವರ್ಷದ ಜನ್ಮ ದಿನದಂಗವಾಗಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಮಧೂರು ಕ್ಷೇತ್ರದಲ್ಲಿ ಅಭಿಷೇಕಾದಿ,ವಿಶೇಷ ಪೂಜೆ ಪುನಸ್ಕಾರ. ಕನ್ಯಪ್ಪಾಡಿ ಆಶ್ರಮವಾಸಿಗಳಿಗೆ ಅನ್ನದಾನ.
ನವೆಂಬರ್ 27, 2023
0
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ 76 ನೇ ವರ್ಷದ ಜನ್ಮ ದಿನದಂಗವಾಗಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ವತಿಯಿಂದ ಮಧೂರು ಕ್ಷೇತ್ರದಲ್ಲಿ ಅಭಿಷೇಕಾದಿ,ವಿಶೇಷ ಪೂಜೆ ಪುನಸ್ಕಾರ. ಕನ್ಯಪ್ಪಾಡಿ ಆಶ್ರಮವಾಸಿಗಳಿಗೆ ಅನ್ನದಾನ.
ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಧೂರು ಇವರ ವತಿಯಿಂದ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರ 76 ನೇ ವರ್ಷದ ಜನ್ಮ ದಿನಾಚರಣೆಯಂಗವಾಗಿ ಬದಿಯಡ್ಕ ಬಳಿಯ ಕನ್ಯಪ್ಪಾಡಿ ಆಶ್ರಯ ಆಶ್ರಮವಾಸಿಗಳಿಗೆ ಅನ್ನದಾನ ನೀಡಲಾಯಿತು. ಅದೇ ರೀತಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಏಕಾದಶ ರುದ್ರಾಭಿಷೇಕ, ಉದಯಾಸ್ತಮಾನ ಪೂಜೆ, ರುದ್ರಾಭಿಷೇಕ ಸೇವೆ ಸಲ್ಲಿಸಲಾಯಿತು. ಈ ವೇಳೆ ಹೆಗ್ಗಡೆಯವರಿಗೆ ಪೂರ್ಣ ಆರೋಗ್ಯ, ಆಯುಷ್ಯ, ಸುಖ ಸಮೃದ್ಧಿ, ನೆಮ್ಮದಿ ಕರುಣಿಸಲೆಂದು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಮುಖೇಶ್, ಮೇಲ್ವಿಚಾರಕಿ ಶ್ರೀಮತಿ, ಕೇಂದ್ರ ಒಕ್ಕೂಟ ಅಧ್ಯಕ್ಷ ಜ್ಞಾನೇಶ್ವರ ಆಚಾರ್ಯ ಪರಕ್ಕಿಲ, ಶೌರ್ಯ ಘಟಕದ ಪ್ರತಿನಿಧಿ ರವೀಂದ್ರ, ಸಂಯೋಜಕಿ ಶ್ರೀಮತಿ ಮೀರಾ, ಸೇವಾ ಪ್ರತಿನಿಧಿಗಳಾದ ಶೋಭ, ಜ್ಯೋತಿ, ವಿನಯ, ನಮಿತಾ ಹಾಗೂ ಶೌರ್ಯ ಘಟಕದ ಹದಿನೈದು ಸ್ವಯಂಸೇವಕರು ಭಾಗವಹಿಸಿದರು.