ಕಾವೂರು ಮುಲ್ಲಕಾಡು ಶ್ರೀ ವಿಠಲ ರುಕುಮಾಯಿ ಭಜನಾ ಮಂದಿರದ 60 ನೇ ವರ್ಷದ ಪ್ರಯುಕ್ತ ಆಯೋಜಿಸಿರುವ ಅಖಂಡ ಭಜನಾ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ
ಡಿಸೆಂಬರ್ 24, 2023
0
ಕಾವೂರು ಮುಲ್ಲಕಾಡು ಶ್ರೀ ವಿಠಲ ರುಕುಮಾಯಿ ಭಜನಾ ಮಂದಿರದ 60 ನೇ ವರ್ಷದ ಪ್ರಯುಕ್ತ ಆಯೋಜಿಸಿರುವ ಅಖಂಡ ಭಜನಾ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ.
ಮಂಗಳೂರು:- ಕಾವೂರು ಮುಲ್ಲಕಾಡು ಶ್ರೀ ವಿಠಲ ರುಕುಮಾಯಿ ಭಜನಾ ಮಂದಿರದ 60 ನೇ ವರ್ಷದ ಪ್ರಯುಕ್ತ ಆಯೋಜಿಸಿರುವ ಅಖಂಡ ಭಜನಾ ಸಪ್ತಾಹದ ಆಮಂತ್ರಣ ಪತ್ರಿಕೆ ಬಿಡುಗಡೆ ಮಂದಿರದಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಭಜನಾ ಸಪ್ತಾಹದ ಗೌರವಾಧ್ಯಕ್ಷರು, ಶ್ರೀ ಕ್ಷೇತ್ರ ಬೊಲ್ಪು ಗುಡ್ಡೆ ಇದರ ಆಡಳಿತ ಮೊಕ್ತೇಸರರಾದ ಚಂದ್ರಶೇಖರ್ ರವರು ಮಾತನಾಡಿ ಭಜನೆಗಳ ಮೂಲಕ ಭಗವಂತನನ್ನು ಆರಾಧಿಸಿ ಎಲ್ಲರಲ್ಲೂ ದೈವ ಭಕ್ತಿ ಮೂಡಿಸುವಂತಹ ಮಹೋನ್ನತ ಕಾರ್ಯಕ್ಕೆ ಪ್ರತಿಯೊಬ್ಬರ ಬೆಂಬಲ, ಸಹಕಾರ ಅಗತ್ಯ ಎಂದು ತಿಳಿಸಿದರು.
ಸಪ್ತಾಹದ ಅಧ್ಯಕ್ಷರಾದ ಕಾರ್ಪೊರೇಟರ್ ಗಾಯತ್ರಿ ರಾವ್ ಮಾತನಾಡಿ ಭಜನಾ ಸಪ್ತಾಹದ ಮೂಲಕ ಯುವಕರಲ್ಲಿ ಭಕ್ತಿಯನ್ನು ಮೂಡಿಸಿ ನಮ್ಮ ಸನಾತನ ಸಂಸ್ಕೃತಿ, ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ಪಸರಿಸಿ ಜಾಗೃತಿ ಮೂಡಿಸುವಂತಹ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ.ಈ ಕಾರ್ಯಕ್ಕೆ ತಮ್ಮ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು.
ವಿಠಲ ರುಕುಮಾಯಿ ಭಜನಾ ಮಂದಿರದ ಅಧ್ಯಕ್ಷರಾದ ತಿಮ್ಮಪ್ಪ ಮಾತನಾಡಿ 1964 ರಲ್ಲಿ ವಿಠಲ ರುಕುಮಾಯಿ ಭಜನಾ ಮಂದಿರದ ಮೂಲಕ ಕಿರಿಯರಲ್ಲಿ ಭಕ್ತಿ ಮಾರ್ಗದ ಬೀಜವನ್ನು ಬಿಚ್ಚಿದ ಶೀನ ಶೆಟ್ಟಿಗಾರ್ ಮತ್ತು ಸ್ಥಾಪಕ ಕಾರ್ಯದರ್ಶಿಯಾದ ಗೋಪಾಲಕೃಷ್ಣ ಶೆಟ್ಟಿಗಾರ್ ರವರು ಯುವಕರಲ್ಲಿ ಭಕ್ತಿಯನ್ನು ಮೂಡಿಸಲು ಸತತ ಪರಿಶ್ರಮದ ಮೂಲಕ ನಿರ್ಮಿಸಿದ ಈ ಮಂದಿರವು ಇಂದು ನಂಬಿ ಬಂದ ಭಕ್ತರ ಕಾಮಧೇನುವಾಗಿ ರೂಪಗೊಳ್ಳುತ್ತಿದ್ದು, 60ನೇ ವರ್ಷದ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಫೆಬ್ರವರಿ 10 2024ರ ಶನಿವಾರದಿಂದ 17 ಫೆಬ್ರವರಿ 2024ರ ಶನಿವಾರದವರೆಗೆ 90ಕ್ಕೂ ಹೆಚ್ಚು ಮಂಡಳಿಗಳು ಭಜನೆಯ ಮೂಲಕ ಪರಮಾತ್ಮನನ್ನು ಆರಾಧಿಸಲು ಅಣಿಗೊಳ್ಳುತ್ತಿವೆ. ಸಮಾರೋಪ ಸಮಾರಂಭ 18.02.2024 ರವಿವಾರ ಸಂಜೆ ನಡೆಯಲಿದೆ.ಇದರ ಪ್ರಯುಕ್ತ 8.2.2024ರ ಗುರುವಾರ ಸಂಜೆ ಶ್ರೀ ರಾಮ ಭಜನಾ ಮಂದಿರ ಕೊಂಚಾಡಿ ಇಲ್ಲಿಂದ ಹೊರೆ ಕಾಣಿಕೆ ಮೆರವಣಿಗೆ ಹೊರಡಲಿದೆ.ಈ ಎಲ್ಲಾ ಕಾರ್ಯಕ್ರಮಕ್ಕೆ ಎಲ್ಲರ ಸಂಪೂರ್ಣ ಬೆಂಬಲ,ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಮಂದಾರಬೈಲು ಇಲ್ಲಿನ ಆಡಳಿತ ಮೊಕ್ತೇಸರರು, ಭಜನಾ ಸಪ್ತಹದ ಗೌರವ ಅಧ್ಯಕ್ಷರಾದ ಅಧ್ಯಕ್ಷರಾದ ಲಕ್ಷ್ಮಣ್ ದೇವಾಡಿಗ ಕಾರ್ಯಾಧ್ಯಕ್ಷರಾದ ಮಾಜಿ ಕಾರ್ಪೊರೇಟರ್ ದೀಪಕ್ ಪೂಜಾರಿ, ಉಪಾಧ್ಯಕ್ಷರಾದ ಕಟೀಲೇಶ್ವರಿ ಶಾಮಿಯಾನದ ಮಾಲೀಕರಾದ ನಿತೀಶ್ ಪೂಜಾರಿ, ದೇವಿ ಕ್ಯಾಟರರ್ಸನ ಮಾಲೀಕರಾದ ರಾಜೇಶ್ ಕೊಂಚಾಡಿ, ಸುಚೇತನ್ ಪೂಜಾರಿ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ಶೆಟ್ಟಿ, ಅತಿಥಿಗಳಾದ ದೇವೇಂದ್ರ ಶೆಟ್ಟಿ ಗಾರ್ ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಂದಿರದ ಪ್ರಧಾನ ಅರ್ಚಕರಾದ ಕುಮಾರ್ ಶೆಟ್ಟಿಗಾರ್, ಪ್ರವೀಣ್,ರಾಮಚಂದ್ರ, ಸತೀಶ್, ಪದ್ಮನಾಭ,ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮಂಡಳಿಯ ಪುಷ್ಪ, ಶಿಲ್ಪ,ಪೂರ್ಣಿಮಾ ಪ್ರಾರ್ಥಿಸಿ, ಕೃತಿ ಸ್ವಾಗತಿಸಿದರು.ಲೋಕೇಶ್ ಮುಲ್ಲಕಾಡು ನಿರೂಪಿಸಿ,ಕೃಪ ವಂದಿಸಿದರು.